ಪೋಸ್ಟ್‌ಗಳು

ಶಾಸನ ಅಧ್ಯಯನ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕರ್ನಾಟಕದಲ್ಲಿ ಶಾಸನ ಅಧ್ಯಯನದ ಇತಿಹಾಸ ಮತ್ತು ಸ್ವರೂಪ

ಪೀಠಿಕೆ :  ಶಾಸನ ಅಧ್ಯಯನವು ಪಾಶ್ಚಾತ್ಯರಲ್ಲಿಯೇ ತಡವಾಗಿ ಆರಂಭವಾಯಿತು. ಏಕೆಂದರೆ ಶಾಸನ ಶಾಸ್ತ್ರದ ಅಧ್ಯಯನವೇ ಹೊಸ ಕ್ಷೇತ್ರ. ಹಾಗಾಗಿ ಭಾರತದಲ್ಲಿ 18ನೇ ಶತಮಾನದ ಅಂತ್ಯದಲ್ಲಿ ಅಧ್ಯಯನ ಆರಂಭವಾಯಿತು. ಕನ್ನಡ ಶಾಸನ ಪ್ರಕಟಣೆಯ ಪ್ರಥಮ ಉಲ್ಲೇಖವನ್ನು 18ನೇ ಶತಮಾನದ ಕಡೆಯಲ್ಲಿ ಕಾಣುತ್ತೇವೆ. ಈವರೆಗೂ ಕನ್ನಡದಲ್ಲಿ ಸುಮಾರು 25,000 ಕ್ಕೂ ಹೆಚ್ಚು ಶಾಸನಗಳು ದೊರೆತಿವೆ. ಕನ್ನಡದಲ್ಲಿ ಶಾಸನ ಅಧ್ಯಯನ :  ಕನ್ನಡ ಶಾಸನಗಳ ಅಧ್ಯಯನ ಆರಂಭವಾಗಿದ್ದು  18ನೇ ಶತಮಾನದಲ್ಲಿ. ಬಂಗಾಳದ Royal Asiatic Society ಪ್ರಕಟಿಸುತ್ತಿದ್ದ Asiatic Researches ಎಂಬ ಸಂಶೋಧನಾ ಬರಹಗಳ ಪತ್ರಿಕೆಯಲ್ಲಿ 1791ರಲ್ಲಿ ಕನ್ನಡ ಶಾಸನಗಳ ಕುರಿತ ಲೇಖನವೊಂದು ಪ್ರಕಟವಾಯಿತು.  ಸರ್ ವಿಲಿಯಮ್ ಜೋನ್ಸ್ ಇದರ ಕರ್ತೃ.  ಈ ಲೇಖನವು ತಾಮ್ರಪಟದ ಮೇಲೆ ಕೆತ್ತಿದ್ದ ವಿವರಕ್ಕೆ ಸಂಬಂಧಿಸಿತ್ತು. ಕಂಚಿಯಲ್ಲಿ ದೊರೆತಿದ್ದ ಈ ತಾಮ್ರಪಟವು ವಿಜಯನಗರ ದೊರೆಗಳು ಕಂಚಿಯ ದೇವಸ್ಥಾನಕ್ಕೆ ಕೊಟ್ಟಿದ್ದ ದತ್ತಿಯನ್ನು ಕುರಿತು ಈ ಶಾಸನ ಹೇಳುತ್ತದೆ.  ಈ ಲೇಖನವೇ "ಕನ್ನಡ ಶಾಸನಗಳನ್ನು ಕುರಿತ ಮೊಟ್ಟಮೊದಲ ಪ್ರಕಟಣೆ"  ಕರ್ನಲ್ ಮೆಕೆಂಜಿ ಎಂಬ ಸೈನ್ಯಾಧಿಕಾರಿ ಶಾಸನಗಳ ಸಂಗ್ರಹ ಮತ್ತು ಪ್ರಕಟಣೆಗೆ ತನ್ನದೇ ಆದ ಸೇವೆ ಸಲ್ಲಿಸಿದ್ದಾನೆ. ಮೈಸೂರು ಸಂಸ್ಥಾನದಲ್ಲಿ ಈತನನ್ನು ಭೂಪರಿವೀಕ್ಷಣೆಗೆ ಸರ್ವೆ ಅಧಿಕಾರಿಯಾಗಿ ನೇಮಿಸಿದ ಸಂದ...