ಪೋಸ್ಟ್‌ಗಳು

ಜಿ.ಎಸ್.ಶಿವರುದ್ರಪ್ಪ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಜಿ.ಎಸ್.ಶಿವರುದ್ರಪ್ಪ ರವರ ಭಾರತೀಯ ಕಾವ್ಯ ಮೀಮಾಂಸೆ (ಎಂ.ಎ.ಕನ್ನಡ)

ಭಾರತೀಯ ಕಾವ್ಯ ಮೀಮಾಂಸೆ ಕವಿ-ಕಾವ್ಯ-ಸಹೃದಯ ವಿಚಾರವನ್ನು ಕುರಿತ ಚರ್ಚೆಯನ್ನು " ಕಾವ್ಯ ಮೀಮಾಂಸೆ " ಎಂದು ಕರೆಯಲಾಗಿದೆ. ಮೀಮಾಂಸೆ ಎಂದರೆ ಚಿಂತನೆ-ಚರ್ಚೆ ಎಂದರ್ಥ. ಆದರೆ "ಕಾವ್ಯ ಮೀಮಾಂಸೆ" ಎಂಬ ಮಾತು ಬಳಕೆಗೆ ಬಂದದ್ದು ತೀರಾ ಇತ್ತೀಚೆಗೆ. ಅಂದರೆ ಸುಮಾರು 9 ನೇ ಶತಮಾನದ ವೇಳೆಗೆ. ಕಾವ್ಯ ವಿಚಾರವನ್ನು ಕುರಿತ ಚರ್ಚೆಗೆ ಕಾವ್ಯ ಮೀಮಾಂಸೆ ಎಂಬ ಹೆಸರು ಕಾಣಿಸಿಕೊಳ್ಳುವುದು "ರಾಜಶೇಖರ" ನಲ್ಲಿ. ಅವನ ಕೃತಿಯ ಹೆಸರೇ ಕಾವ್ಯ ಮೀಮಾಂಸೆ. ರಾಜಶೇಖರನ ಕೃತಿಯ ಹೆಸರು-----> ಕಾವ್ಯಮೀಮಾಂಸೆ . ಇಂದು ಕಾವ್ಯಮೀಮಾಂಸೆಯನ್ನು ಇಂಗ್ಲೀಷಿನ Poetics ಪದಕ್ಕೆ ಸಂವಾದಿಯಾಗಿ ಬಳಸಲಾಗುತ್ತಿದೆ. ಆದರೆ ಇದಕ್ಕೂ ಮೊದಲಿನ‌ ಕಾವ್ಯ ಶಾಸ್ತ್ರಕ್ಕೆ "ಅಲಂಕಾರ ಶಾಸ್ತ್ರ" ಎಂದೇ ಹೆಸರಿತ್ತು. ಉದಾ: "ಭಾಮಹ" ನ ಕೃತಿ------> ಕಾವ್ಯಾಲಂಕಾರ "ವಾಮನ" ನ ಕೃತಿ-------> ಕಾವ್ಯಾಲಂಕಾರ ಸೂತ್ರ "ರುದ್ರಟ"ನ ಕೃತಿ----------> ಕಾವ್ಯಾಲಂಕಾರ . ಇದಕ್ಕೆ ಹಿಂದಿನ ಶಾಸ್ತ್ರಕಾರರಿಗೆ ಕಾವ್ಯದ ಬಗ್ಗೆ ಇದ್ದ ಕಲ್ಪನೆಯೇ ಕಾರಣ ಎನ್ನಬಹುದು. "ಕಾವ್ಯ" ಎಂದರೆ ಒಂದಲ್ಲ ಒಂದು ಬಗೆಯ ಅಲಂಕಾರದಿಂದ ಅಥವಾ ಉಕ್ತಿ ವೈಚಿತ್ರದಿಂದ ಕೂಡಿರುವಂಥದ್ದು ಎಂದು ಭಾವಿಸಿದ್ದರು. ಅಲ್ಲದೇ ಕಾವ್ಯವು ಅಲಂಕಾರದಿಂದಲೇ ಗ್ರಾಹ್ಯವಾಗುತ್ತದೆ ಎಂದ...