ಪೋಸ್ಟ್‌ಗಳು

ಲಯ ಯತಿ ಪ್ರಾಸ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಲಯ, ಯತಿ, ಪ್ರಾಸ: ಎಂ.ಎ.ಕನ್ನಡ

ಲಯ:           ಲಯ ಎಂಬ ಪದ ಸಂಸ್ಕೃತದ ’ಲಯ್’ ಎಂಬ ಧಾತುವಿನಿಂದ ನಿಷ್ಪನ್ನಗೊಂಡಿದೆ.                     ಲಯ- - - - > ನಡಿಗೆ, ಚಲನೆ, ಶೃತಿ       'ಲಯ’ ಎಂಬ ಪದಕ್ಕೆ ನುಡಿ, ಚಲನೆ, ಶೃತಿ ಎಂಬ ಅರ್ಥವಿದೆ. ಇಂಗ್ಲೀಷಿನ RYTHM ಎನ್ನುವುದು ಇದಕ್ಕೆ ಸಂವಾದಿಯಾದ ಪದ. ’ಲಯ’ ಎಂಬ ಪದಕ್ಕೆ ಪ್ರಳಯ, ನಾಶವಾಗು, ಕರಗು ಮುಂತಾದ ಅರ್ಥಗಳೂ ಇವೆ. ಆದುದರಿಂದ ’ಲಯ’ ಎನ್ನುವುದಕ್ಕೆ ನಡೆ/ ಗತಿ ಎಂಬುದನ್ನು ವಿಶಾಲಾರ್ಥದಲ್ಲಿ ಸ್ವೀಕರಿಸಲಾಗಿದೆ.     ’ಲಯ’ವನ್ನು ಪದ್ಯ-ಗದ್ಯ ಎರಡರಲ್ಲಿಯೂ ಪರಿಗಣಿಸಬಹುದು. ಸಂಗೀತದ ಭಾಷೆಯಲ್ಲಿ ’ಲಯ’ ಎನ್ನುವುದು ಒಂದು ಕಾಲಮಾನ. ಇಂಗ್ಲೀಷಿನಲ್ಲಿ RYTHM ಎನ್ನುವುದು ಪದ್ಯದ ಅನಿವಾರ್ಯ. ಪದ್ಯ-ಗದ್ಯ ಎರಡರಲ್ಲಿಯೂ ಲಯ ಇರುತ್ತದೆ. ಗದ್ಯದಲ್ಲಿ ಲಯ ಅನಿಯತವಾಗಿದ್ದರೆ, ಪದ್ಯದಲ್ಲಿ ನಿಯತವಾಗಿರುತ್ತದೆ. ಪದ್ಯದಲ್ಲಿ ಹಾಡುವ ಲಯವಿದ್ದರೆ, ಗದ್ಯದಲ್ಲಿ ಓದುವ ಲಯವಿರುತ್ತದೆ.                              ಲಯ               ...