ಪೋಸ್ಟ್‌ಗಳು

ಎಡ್ವರ್ಡ್ ಬುಲ್ಲೋ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಎಡ್ವರ್ಡ್ ಬುಲ್ಲೋನ ಮಾನಸಿಕ ದೂರ - ಸ್ವರೂಪ ಮತ್ತು ವ್ಯಾಪ್ತಿ

ವ್ಯಕ್ತಿ ಪರಿಚಯ:  19ನೇ ಶತಮಾನದ ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲಿ ಬೆನೆಡೆಟ್ಟೋ ಕ್ರೋಚೆಯಷ್ಟೇ ಮಹತ್ವನಾದವನು ಎಡ್ವರ್ಡ್ ಬುಲ್ಲೋ . ಈತ ಸಹ ರಸ ಸಿದ್ದಾಂತಕ್ಕೆ ಸಂವಾದಿಯಾದ ಮಾನಸಿಕ ದೂರ (Physical Distance) ಎಂಬ ಸಿದ್ಧಾಂತ ಮಂಡಿಸಿದ್ದಾನೆ. ಇದು ಕಲೆಯಿಂದ ನಾವು ಪಡೆಯಬೇಕಾದ ಅನುಭವ ಮತ್ತು ಕಲೆಗಾರ ಲೋಕ ಸಂಬಂಧದಲ್ಲಿ ಕಲೆಯೊಂದಿಗೆ ಇರಿಸಿಕೊಳ್ಳಬೇಕಾದ ಸಂಬಂಧದ ಕುರಿತಾಗಿದೆ.  ಈ ಸ್ವರೂಪವನ್ನು ಬುಲ್ಲೋ ಒಂದು ಹೊಸ ಪರಿಭಾಷೆಯಲ್ಲಿ ಹಿಡಿದಿಡಲು ಪ್ರಯತ್ನಿಸಿ, ಅದನ್ನು "ಮಾನಸಿಕ ದೂರ" ಎಂದು ಕರೆದಿದ್ದಾನೆ. ಇದು ಇಂದಿಗೂ ಪರಿಗಣಿಸಬೇಕಾದ ಒಂದು ಮೌಲಿಕವಾದ ರಸ ತತ್ವವಾಗಿದೆ. ಪೀಠಿಕೆ :  ಕನ್ನಡದಲ್ಲಿ Physical Distance ಗೆ ಸಂವಾದಿಯಾಗಿ ಮಾನಸಿಕ ದೂರ ಎಂಬ ಪದವನ್ನು ಬಳಸುತ್ತೇವೆ. ಈ Physical Distance ಎನ್ನುವುದು ಲೋಕ ವಸ್ತುವನ್ನಾಗಲೀ, ಕಲಾವಸ್ತುವನ್ನಾಗಲಿ ಕುರಿತು ಕಲಾವಿದ ಮತ್ತು ಪ್ರೇಕ್ಷಕನ ಮಧ್ಯೆ ಇರಬೇಕಾದ ಒಂದು ವಿಶಿಷ್ಟ ಸಂಬಂಧವನ್ನು ಸೂಚಿಸುತ್ತದೆ. ಲೋಕದಲ್ಲಿ ನಾವು ವಸ್ತುಗಳನ್ನು ತೀರ ಹತ್ತಿರದಲ್ಲಿ ಇರಿಸಿಕೊಂಡು, ಎಂದರೆ ಕೇವಲ ವ್ಯಾವಹಾರಿಕ ಪ್ರಯೋಜನದ ದೃಷ್ಟಿಯಿಂದ ನೋಡುವುದು ನಮಗೆ ಸಹಜವಾದದ್ದು. ಈ ಸಂಬಂಧದಲ್ಲಿ ನಮಗೆ ಸೌಂದರ್ಯಾನುಭವ ಕಾಣಿಸುವುದಿಲ್ಲ. ಏಕೆಂದರೆ ಈ ವ್ಯಾವಹಾರಿಕ ಸಂಬಂಧದಲ್ಲಿ ಲಾಭ, ನಷ್ಟ, ಸುಖ, ದುಃಖ, ಇಷ್ಟ, ಅನಿಷ್ಟ ಇತ್ಯಾದಿ ಭಾವನೆಗಳೇ ಪ್ರಧಾನವಾಗಿರುತ್ತದೆ. ಆದ್ದ...

ಮಾನಸಿಕ ದೂರ (ಟಿಪ್ಪಣಿ)

ಕನ್ನಡದಲ್ಲಿ 'Physical Distance' ಎನ್ನುವುದಕ್ಕೆ ಸಂವಾದಿಯಾಗಿ 'ಮಾನಸಿಕ ದೂರ', 'ಮನೋದೂರ' ಎಂಬ ಪದ ಬಳಕೆಯಲ್ಲಿದೆ. ಈ 'Physical Distance' ಅಥವಾ 'ಮಾನಸಿಕ ದೂರ' ಎನ್ನುವುದು ಲೋಕ ವಸ್ತುವನ್ನಾಗಲೀ ಅಥವಾ ಕಲಾವಸ್ತುವನ್ನಾಗಲೀ ಕುರಿತು ಕಲಾವಿದ ಮತ್ತು ಪ್ರೇಕ್ಷಕರಿಗೆ ಇರಬೇಕಾದ ಒಂದು ವಿಶಿಷ್ಟ ಸಂಬಂಧವನ್ನು ಸೂಚಿಸುತ್ತದೆ. ಮಾನಸಿಕ ದೂರ --> ಕಲಾ ವಸ್ತುವನ್ನು ಕುರಿತು ಕಲಾವಿದ ಮತ್ತು ಪ್ರೇಕ್ಷಕರ ನಡುವೆ ಇರುವ ಒಂದು ವಿಶಿಷ್ಟ ಸಂಬಂಧ. ಲೋಕದಲ್ಲಿ ನಾವು ವಸ್ತುಗಳನ್ನು ' ಹತ್ತಿರ 'ದಲ್ಲಿರಿಸಿ, ಅಂದರೆ ಕೇವಲ ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೆ, ನಮಗೆ ಅದರಲ್ಲಿ ಸೌಂದರ್ಯ ಕಾಣಿಸುವುದಿಲ್ಲ. ಏಕೆಂದರೆ ಈ ವ್ಯಾವಹಾರಿಕ ಸಂಬಂಧದಲ್ಲಿ ಲಾಭ, ನಷ್ಟ, ಸುಖ, ದುಃಖ, ಇಷ್ಟ, ಅನಿಷ್ಟ ಇತ್ಯಾದಿ ಭಾವನೆಗಳೇ ಪ್ರಧಾನವಾಗಿರುತ್ತದೆ.  ಆದ್ದರಿಂದ ಈ ವರ್ತುಲದಿಂದ ವಸ್ತುವನ್ನು ' ದೂರ' ಇರಿಸಿ ವೈಯಕ್ತಿಕವಲ್ಲದ ಒಂದು ನೆಲೆಯಿಂದ ನೋಡಿದಾಗ, ಸೌಂದರ್ಯಾನುಭವ ಲಭಿಸುತ್ತದೆ‌. ಆದ ಕಾರಣ ಯಾವ ಒಂದು ನಿಯತವಾದ ದೂರದಲ್ಲಿ ಇರಿಸಿಕೊಂಡು ನೋಡಿದರೆ ವಸ್ತು ನಮಗೆ ಸೌಂದರ್ಯಾನುಭವಕಾರಿಯಾಗಿ ತೋರುವುದೋ, ಆ ಒಂದು ದೂರವನ್ನೇ ಎಡ್ವರ್ಡ್ ಬುಲ್ಲೋ  "ಮಾನಸಿಕ ದೂರ" ಎನ್ನುತ್ತಾನೆ. ಇದಕ್ಕಾಗಿ ಬುಲ್ಲೋ ಕೊಡುವ ಒಂದು ಚಿಕ್ಕ ಉದಾಹರಣೆ ಎಂದರೆ, ಕಾಡಿನಲ್ಲಿ ಹೋಗುವ...