ಪೋಸ್ಟ್‌ಗಳು

ಕಪ್ಪೆ ಅರಭಟ್ಟ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಪ್ಪೆ ಅರಭಟ್ಟನ ಶಾಸನ

ಪೀಠಿಕೆ :  ಕಪ್ಪೆ ಅರಭಟ್ಟನ ಶಾಸನ ವಿಜಾಪುರ ಜಿಲ್ಲೆಯ ಬಾದಾಮಿ ತಾಲ್ಲೂಕಿಗೆ ಸಮೀಪದ ಬಂಡೆಗಲ್ಲಿನ ಮೇಲೆ ದೊರೆತಿದೆ. ಈ ಶಾಸನವು ಕನ್ನಡದಲ್ಲಿ ವಿರಳವಾಗಿ ದೊರೆಯುವ ಬಂಡೆಗಲ್ಲಿನ ಶಾಸನದಲ್ಲಿ ಒಂದಾಗಿದೆ. ಈ ಶಾಸನ ಹಾಕಿಸುವಾಗ ಯಾವ ರಾಜ ಆಡಳಿತ ನಡೆಸುತ್ತಿದ್ದ ಎಂಬ ಮಾಹಿತಿ ನಮಗೆ ಲಭ್ಯವಿಲ್ಲ. ಕನ್ನಡ ಭಾಷೆಯಲ್ಲಿರುವ ಈ ಶಾಸನ ಕಪ್ಪೆ ಅರಭಟ್ಟ ಎಂಬುವವನನ್ನು ಕೀರ್ತಿಸಿವೆ.  ಇದು ಪದ್ಯವೇ ಅಥವಾ ಗದ್ಯವೇ ಎನ್ನುವುದರ ಬಗ್ಗೆ ಕೂಡ ಇನ್ನೂ ಚರ್ಚೆ ನಡೆಯುತ್ತಲೇ ಇದೆ. ಇದರಲ್ಲಿ ಪ್ರಾಚೀನ ಕನ್ನಡದ ಅವಶ್ಯ ಲಕ್ಷಣವಾದ ಪ್ರಾಸ ಇರದೇ ಇರುವುದರಿಂದ ಇದನ್ನು ಗದ್ಯವೆಂದೇ ತಿಳಿಯಬೇಕಾಗಿದೆ. ನಂತರ ಬರುವ ಮೂರು ತ್ರಿಪದಿಗಳಲ್ಲಿ ಕಪ್ಪೆ ಅರಭಟ್ಟನ ಸ್ವಭಾವ ಚಿತ್ರಣ ಮೂಡಿ ಬಂದಿದೆ. ಪ್ರಾಣಕ್ಕಿಂತಾ ಹೆಚ್ಚಾಗಿ ತಾನು ನಂಬಿಕೊಂಡು ಬಂದಿರುವ ಜೀವನ ಶ್ರದ್ಧೆ, ಸ್ವಾಭಿಮಾನವೇ ದೊಡ್ಡದು ಎಂದು ಅದರಂತೆ ಜೀವಿಸಿದ ವ್ಯಕ್ತಿಯ ಚಿತ್ರಣ ಇಲ್ಲಿದೆ. ಇದನ್ನು ನೋಡಿದರೆ ಈ ಶಾಸನ ಕಪ್ಪೆ ಅರಭಟ್ಟ ಬದುಕಿದ್ದಾಗ ಹಾಕಿಸಿದಂತೆ ಕಾಣುವುದಿಲ್ಲ. ಬಹುಶಃ ಅವನ ಮರಣದ ನಂತರ ಹಾಕಿಸಿರಬಹುದೆಂದು ತೋರುತ್ತದೆ. ಹಾಗಾಗಿ ಇದು ಪ್ರಶಸ್ತಿ ಶಾಸನವಲ್ಲ. ಇದೊಂದು ವೀರಗಲ್ಲು . ಶಾಸನದ ಕಾಲ ಸುಮಾರು ಕ್ರಿ.ಶ.7ನೇ ಶತಮಾನ .  ಈ ಶಾಸನ ಪ್ರಕಟಿಸಿದವರು ಜೆ.ಎಫ್.ಫ್ಲೀಟ್ . ಕಪ್ಪೆ ಅರಭಟ್ಟನ ಶಾಸನದ ಮಹತ್ವ : ಕರ್ನಾಟಕದ ಪ್ರಾಚೀನ ಜನಜೀವನದಲ್ಲಿ ವೀರಜೀವನಕ್ಕೆ...

ಕಪ್ಪೆ ಅರಭಟ್ಟ (ಟಿಪ್ಪಣಿ)

ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ ವಿಜಾಪುರ ಜಿಲ್ಲೆಯ ಬಾದಾಮಿ ತಾಲೂಕಿನ ಬಾದಾಮಿಗೆ ಸಮೀಪವಿರುವ ತಟ್ಟುಕೋಟೆ ಎಂಬಲ್ಲಿ ಬಂಡೆಗಲ್ಲಿನ ಮೇಲೆ ಕೊರೆದಿರುವ ಶಾಸನವಾಗಿದೆ. ಈ ಶಾಸನ ಯಾವ ರಾಮ ಮನೆತನದ ಕಾಲದಲ್ಲಿ ಹುಟ್ಟಿತು, ಆಗ ಆಳ್ವಿಕೆಯಲ್ಲಿದ್ದ ರಾಜ ಯಾರು ಎಂಬ ಬಗ್ಗೆ ಶಾಸನದಲ್ಲಿ ಯಾವ ಸಾಕ್ಷ್ಯಾಧಾರಗಳೂ ಇಲ್ಲ. ಕರ್ನಾಟಕದಲ್ಲಿ ವಿರಳವಾಗಿ ದೊರೆಯುವ ಬಂಡೆಗಲ್ಲು ಶಾಸನಗಳಲ್ಲಿ ಇದೂ ಒಂದಾಗಿದೆ. ಕನ್ನಡ ಭಾಷೆಯಲ್ಲಿರುವ ಈ ಶಾಸನ ಕಪ್ಪೆ ಅರಭಟ್ಟ ಎಂಬುವವನನ್ನು ಕೀರ್ತಿಸಿದೆ.  ಆದರೆ ಇದು ಪದ್ಯವೇ ಅಥವಾ ಗದ್ಯವೇ ಎಂಬ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇದೆ.  ಇದರಲ್ಲಿ ತನ್ನ ಪ್ರಾಣಕ್ಕಿಂತಾ ಹೆಚ್ಚಾಗಿ ತಾನು ನಂಬಿಕೊಂಡು ಬಂದಿರುವ ಶ್ರದ್ಧೆ, ಸ್ವಾಭಿಮಾನವೇ ದೊಡ್ಡದು ಎಂದು ಸಾರುವ ವ್ಯಕ್ತಿ ಚಿತ್ರಣವನ್ನು ಶಾಸನದಲ್ಲಿ ಕಾಣಬಹುದಾಗಿದೆ. ಬಹುಶಃ ಇದನ್ನು ವ್ಯಕ್ತಿಯ ಮರಣದ ನಂತರ ಹಾಕಿಸಿರಬಹುದಾದ ಸಾಧ್ಯತೆಯಿದೆ. ಹಾಗಾಗಿ ಇದು ಪ್ರಶಸ್ತಿ ಶಾಸನವಲ್ಲ. ಇದೊಂದು ವೀರಗಲ್ಲು ಎಂದೇ ಭಾವಿಸಬೇಕಾಗುತ್ತದೆ.   "...ಕಪ್ಪೆ ಅರಭಟ್ಟನ್ ಶಿಷ್ಟಜನಪ್ರಿಯನ್ ಕಷ್ಟಜನ ವರ್ಜಿತನ್ ಕಲಿಯುಗ ವಿಪರೀತನ್..." ಭಾವಾರ್ಥ :  ಶಾಸನದ ಕೇಂದ್ರ ವ್ಯಕ್ತಿ ಕಪ್ಪೆ ಅರಭಟ್ಟ. ಈತ ಒಳ್ಳೆಯವರಿಗೆ ಒಳ್ಳೆಯವು. ಕೆಟ್ಟವರಿಗೆ ಬೇಡವಾದವನು.  "ಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯನ್ ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀ...