ಪೋಸ್ಟ್‌ಗಳು

ದೇಕಬ್ಬೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಶಾಸನ ಸಾಹಿತ್ಯದಲ್ಲಿ ದೇಕಬ್ಬೆ ಶಾಸನದ ಸ್ಥಾನ

ಪೀಠಿಕೆ :  ಶಾಸನಗಳಲ್ಲಿ ಹಲವು ಪ್ರಕಾರಗಳುಂಟು. ಅದರಲ್ಲಿ ಆತ್ಮಬಲಿಯೂ ಒಂದು. ಬೇರೆ ಬೇರೆ ಕಾರಣಗಳಿಗಾಗಿ ಪ್ರಾಣತ್ಯಾಗ ಮಾಡುತ್ತಿದ್ದ ಅನೇಕ ಉದಾಹರಣೆಗಳುಂಟು. ಅವರಿಗೆ ಹಾಕಿಸುತ್ತಿದ್ದ ಶಾಸನಗಳಿಗೆ ಸ್ಮಾರಕ ಶಾಸನ ಎಂದು ಹೆಸರು. ವೀರರ ಪತ್ನಿಯರು ಸಹಗಮನ ಪ್ರಕಾರ ಮರಣ ಹೊಂದುತ್ತಿದ್ದರು. ಆಗ ಅವರಿಗೆ ಹಾಕಿಸುತ್ತಿದ್ದ ಸ್ಮಾರಕಗಳನ್ನು ಮಹಾಸತಿಕಲ್ಲು ಅಥವಾ ಮಾಸ್ತಿಕಲ್ಲು ಎಂದು ಕರೆಯುತ್ತಿದ್ದರು.  "ದೇಕಬ್ಬೆಯ ಶಾಸನ ಅಂತಹಾ ಒಂದು ಮಾಸ್ತಿಕಲ್ಲು" ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಬೆಳತೂರು ಗ್ರಾಮದ ಅಡ್ಡಕಟ್ಟೆ ಹೊಲದಲ್ಲಿರುವ ಮಹಾಸತಿ ಶಾಸನವನ್ನು ಪತ್ತೆ ಹಚ್ಚಿದವರು  ಬಿ.ಎಲ್.ರೈಸ್. ' ಎಪಿಗ್ರಾಫಿಯಾ ಕರ್ನಾಟಿಕಾ'ದ ಎರಡನೇ ಎರಡನೇ ಸಂಪುಟದಲ್ಲಿ ಶಾಸನದ ಪಠ್ಯವನ್ನು ಪ್ರಕಟಿಸಿದರು.  ನಂತರ ರೆವೆರೆಂಡ್ ಕಿಟ್ಟೆಲ್ ರವರು ಈ ಶಾಸನವನ್ನು ಎಪಿಗ್ರಾಫಿಯಾ ಇಂಡಿಕಾ ದಲ್ಲಿ ಪ್ರಕಟಿಸಿದರು.  ಈ ಶಾಸನದ ವಿಶೇಷತೆಯೆಂದರೆ ಇದು ಬೇರೆ ಶಾಸನಗಳಂತೆ ದೇವತಾ ಶ್ಲೋಕದಿಂದ ಪ್ರಾರಂಭವಾಗುವುದಿಲ್ಲ. ಗದ್ಯಕ್ಕಿಂತ ಪದ್ಯಭಾಗವೇ ಇದರಲ್ಲಿ ಹೆಚ್ಚು. ಇದರಲ್ಲಿ ಒಟ್ಟು 23 ಪದ್ಯಗಳಿವೆ.  ದೇಕಬ್ಬೆಯು ತನ್ನ ಪತಿಯ ಮರಣದ ಸುದ್ದಿ ಕೇಳಿದ ತಕ್ಷಣ ಇಹಲೋಕವನ್ನು ತ್ಯಜಿಸಲು ಸಿದ್ಧಳಾದಳು. ಚಿತೆಯನ್ನು ಸಿದ್ಧಪಡಿಸಿ ಉರಿಯುತ್ತಿದ್ದ ಚಿತೆ ಹೊಕ್ಕಳು. ತನ್ನ ಮಗಳ ಸ್ಮಾರಕವಾಗಿ ಆಕೆಯ ತಂದೆ ಶಾಸನ ಸಹಿತವಾದ ...

ದೇಕಬ್ಬೆಯ ಶಾಸನದ ಹಿನ್ನೆಲೆಯಲ್ಲಿ ಸತಿ ಪದ್ಧತಿಯ ಪರಿಚಯ

ಪೀಠಿಕೆ :  ಪ್ರಸ್ತುತ ಶಾಸನದ ಕೇಂದ್ರ ವ್ಯಕ್ತಿಯಾದ ದೇಕಬ್ಬೆ ರವಿಗ ಮತ್ತು ಪೊನ್ನಕ್ಕರ ಮಗಳು. ಆಕೆ ವಿವಾಹವಾದುದು ನವಲೆನಾಡಿನ ಪ್ರಭುವಾದ ಏಚನನ್ನು. ಏಚ ತನ್ನ ಪತ್ನಿಯೊಡನೆ ಸುಖವಾಗಿ ಬಾಳುತ್ತಿದ್ದ. ಆತ ಒಬ್ಬ ಜಟ್ಟಿ, ಕುಸ್ತಿ ಪಟುವಾಗಿದ್ದ. ಯಾವುದೋ ಒಂದು ಸ್ಪರ್ಧೆಯಲ್ಲೋ ಅಥವಾ ಹೋರಾಟದಲ್ಲಿಯೋ ತನ್ನ ಎದುರಾಳಿಯನ್ನು ಏಚ ಇರಿದು ಕೊಂದುಬಿಟ್ಟ. ಅದಕ್ಕಾಗಿ ಆತನಿಗೆ ಮರಣದಂಡನೆ ಶಿಕ್ಷೆಯಾಯ್ತು. ಆತ ಮೃತನಾದ.  ದೇಕಬ್ಬೆಗೆ ಗಂಡನ ಸಾವಿನ ಸುದ್ದಿ ತಿಳಿದೊಡನೆ ಆಕೆ ಇಹಲೋಕವನ್ನು ತ್ಯಜಿಸಲು ನಿರ್ಧರಿಸಿದಳು.  ಚಿತೆಯನ್ನು ಸಿದ್ಧಪಡಿಸಲಾಯ್ತು.  ದೇಕಬ್ಬೆಯ ತಂದೆ, ತಾಯಿ, ಬಂಧು, ಬಳಗ, ಆಪ್ತೇಷ್ಟರು ಎಲ್ಲರೂ ಸೇರಿ ಆಕೆ ತನ್ನ ಸಂಕಲ್ಪ ಕೈ ಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರು. ಕಾಲು ಹಿಡಿದು ಕೇಳಿಕೊಂಡರು.‌ ದೇಕಬ್ಬೆ ವಿಚಲಿತಳಾಗಲಿಲ್ಲ. ಕೊಟ್ಟ ಮನೆಗೂ ಸೇರಿದ ಮನೆಗೂ ಶೋಭೆ ತರದ ಕೆಲಸ ತಾನು ಮಾಡುವುದಿಲ್ಲ ಎಂದು ದೇಕಬ್ಬೆ ಹೇಳಿಬಿಟ್ಟಳು. ನಂತರ ಜನರಿಗೆ ತನ್ನಲ್ಲಿರುವ ಬಟ್ಟೆ, ಬರೆ, ಆಭರಣ, ಹಣ ಎಲ್ಲವನ್ನೂ ಜನರಿಗೆ ಹಂಚಿ, ಬರಿಗೈಯಲ್ಲಿ ದೇವರಿಗೆ ನಮಿಸಿ, ಉರಿಯುತ್ತಿದ್ದ ಚಿತೆ ಹೊಕ್ಕಳು ದೇಕಬ್ಬೆ. ನಂತರ ಸತಿಯಾದಳು. ಈ ಶಾಸನದಲ್ಲಿ ದೇಕಬ್ಬೆಯ ಗುಣ ಪ್ರಶಂಸೆ ಮಾಡಲಾಗಿದೆ. ತನ್ನ ಮಗಳ ಸ್ಮಾರಕವಾಗಿ ಶಾಸನ ಸಹಿತವಾದ ಶಿಲಾಸ್ತಂಭವನ್ನು ಮಾಡಿಸಿದ್ದು ಆಕೆಯ ತಂದೆ ರವಿಗ.  ...

ದೇಕಬ್ಬೆ ಶಾಸನ : ಟಿಪ್ಪಣಿ

ಪ್ರಸ್ತುತ ಶಾಸನದ ಕೇಂದ್ರ ವ್ಯಕ್ತಿಯಾದ ದೇಕಬ್ಬೆ ರವಿಗ ಮತ್ತು ಪೊನ್ನಕ್ಕರ ಮಗಳು. ಆಕೆ ವಿವಾಹವಾದುದು ನವಲೆನಾಡಿನ ಪ್ರಭುವಾದ ಏಚನನ್ನು. ಏಚ ತನ್ನ ಪತ್ನಿಯೊಡನೆ ಸುಖವಾಗಿ ಬಾಳುತ್ತಿದ್ದ. ಆತ ಒಬ್ಬ ಜಟ್ಟಿ, ಕುಸ್ತಿ ಪಟುವಾಗಿದ್ದ. ಯಾವುದೋ ಒಂದು ಸ್ಪರ್ಧೆಯಲ್ಲೋ ಅಥವಾ ಹೋರಾಟದಲ್ಲಿಯೋ ತನ್ನ ಎದುರಾಳಿಯನ್ನು ಏಚ ಇರಿದು ಕೊಂದುಬಿಟ್ಟ. ಅದಕ್ಕಾಗಿ ಆತನಿಗೆ ಮರಣದಂಡನೆ ಶಿಕ್ಷೆಯಾಯ್ತು. ಆತ ಮೃತನಾದ.  ದೇಕಬ್ಬೆಗೆ ಗಂಡನ ಸಾವಿನ ಸುದ್ದಿ ತಿಳಿದೊಡನೆ ಆಕೆ ಇಹಲೋಕವನ್ನು ತ್ಯಜಿಸಲು ನಿರ್ಧರಿಸಿದಳು .  ಚಿತೆಯನ್ನು ಸಿದ್ಧಪಡಿಸಲಾಯ್ತು.  ದೇಕಬ್ಬೆಯ ತಂದೆ, ತಾಯಿ, ಬಂಧು, ಬಳಗ, ಆಪ್ತೇಷ್ಟರು ಎಲ್ಲರೂ ಸೇರಿ ಆಕೆ ತನ್ನ ಸಂಕಲ್ಪ ಕೈ ಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರು. ಕಾಲು ಹಿಡಿದು ಕೇಳಿಕೊಂಡರು.‌ ದೇಕಬ್ಬೆ ವಿಚಲಿತಳಾಗಲಿಲ್ಲ. ಕೊಟ್ಟ ಮನೆಗೂ ಸೇರಿದ ಮನೆಗೂ ಶೋಭೆ ತರದ ಕೆಲಸ ತಾನು ಮಾಡುವುದಿಲ್ಲ ಎಂದು ದೇಕಬ್ಬೆ ಹೇಳಿಬಿಟ್ಟಳು. ನಂತರ ಜನರಿಗೆ ತನ್ನಲ್ಲಿರುವ ಬಟ್ಟೆ, ಬರೆ, ಆಭರಣ, ಹಣ ಎಲ್ಲವನ್ನೂ ಜನರಿಗೆ ಹಂಚಿ, ಬರಿಗೈಯಲ್ಲಿ ದೇವರಿಗೆ ನಮಿಸಿ, ಉರಿಯುತ್ತಿದ್ದ ಚಿತೆ ಹೊಕ್ಕಳು ದೇಕಬ್ಬೆ. ನಂತರ ಸತಿಯಾದಳು. ಈ ಶಾಸನದಲ್ಲಿ ದೇಕಬ್ಬೆಯ ಗುಣ ಪ್ರಶಂಸೆ ಮಾಡಲಾಗಿದೆ. ತನ್ನ ಮಗಳ ಸ್ಮಾರಕವಾಗಿ ಶಾಸನ ಸಹಿತವಾದ ಶಿಲಾಸ್ತಂಭವನ್ನು ಮಾಡಿಸಿದ್ದು ಆಕೆಯ ತಂದೆ ರವಿಗ.  ಪತಿಯ ಶವದ ಜೊತೆಯಲ್ಲಿಯೇ ಚಿತೆಯೇರಿ ಮರಣ ಹೊಂದುವ...