ಪೋಸ್ಟ್‌ಗಳು

ಕನ್ನಡ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಪಿ.ಬಿ.ಷೆಲ್ಲಿಯ ಕಾವ್ಯ ಸಮರ್ಥನೆ

  ಕವಿ ಪರಿಚಯ  :  ಷೆಲ್ಲಿಯು ಇಂಗ್ಲೆಂಡಿನ ಒಂದು ಹಳ್ಳಿಯಲ್ಲಿ ಜನಿಸಿದ. ತಂದೆ ತಾಯಿಗೆ ಮೊದಲ ಮಗ ಷೆಲ್ಲಿ‌. ಹುಟ್ಟೂರಿನಲ್ಲಿಯೇ ಬಾಲ್ಯದ ವಿದ್ಯಾಭ್ಯಾಸ ಮುಗಿಸಿ  ಸಿಯಾನ್ ಹೌಸ್ ಅಕಾಡೆಮಿ  ಎಂಬ ಶಾಲೆ ಸೇರಿದ. ಅದ್ಭುತ ಪವಾಡದ ಕಥೆಗಳನ್ನು ಓದಿದ. ಸಹಪಾಠಿಗಳೊಂದಿಗೆ ಆಟಕ್ಕೆ ಸೇರದೇ ಶತಪಥ ತಿರುಗುತ್ತ ಚಿಂತನೆ ನಡೆಸಿದ. ಪರರ ದುಃಖ ಕಂಡು ಕಣ್ಣೀರು ಸುರಿಸುತ್ತಿದ್ದ.‌ ಪ್ರಕೃತಿ ಪ್ರೇಮಿಯಾಗಿದ್ದ. ಪುಸ್ತಕಗಳನ್ನು ಹೆಚ್ಚೆಚ್ಚು ಓದುತ್ತಿದ್ದ.  ನಂತರ  ಈಟಾನ್  ಎಂಬ ಶಾಲೆಗೆ ಸೇರಿದವನು, ಸಾರ್ವಜನಿಕ ಕಾರ್ಯಗಳಲ್ಲಿ ಭಾಗವಹಿಸಿದ. ರಸಾಯನ ಶಾಸ್ತ್ರದ ವ್ಯಾಸಂಗದ ಜೊತೆ ನಾಟಕದ ರಚನೆ, ಅಭಿನಯ ಸಹ ಮಾಡಿದ. ಆದರೂ ಅವನಿಗೆ ಪ್ರಯೋಗ ಶಾಲೆಯಲ್ಲಿ ರಸಾಯನ ಶಾಸ್ತ್ರದ ಪ್ರಯೋಗ ನಡೆಸುವುದೇ ಹೆಚ್ಚು ಇಷ್ಟದ ವಿಷಯವಾಗಿತ್ತು. "ರಾಜಕೀಯ ನ್ಯಾಯ" ಎಂಬ ಗ್ರಂಥದಿಂದ ಪ್ರೇರಿತನಾಗಿ ಕ್ರಾಂತಿಕಾರಕನಾಗಿ ಭಾಷಣ ಮಾಡಿದ. ಶಾಲೆಯ ವಿದ್ಯಾರ್ಥಿ ಸೇವಾ ಪದ್ಧತಿ ವಿರುದ್ಧ ತಿರುಗಿಬಿದ್ದ.  ಸ್ವಲ್ಪ ವರ್ಷಗಳಲ್ಲಿ " ನಾಸ್ತಿಕ್ಯದ ಅವಶ್ಯಕತೆ " ಎಂಬ ಕಿರುಹೊತ್ತಿಗೆ ಪ್ರಕಟಿಸಿದ. ಅದರಿಂದಾಗಿ ತಾನು ಓದುತ್ತಿದ್ದ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಹೊರದೂಡಲ್ಪಟ್ಟ.  ಲಂಡನ್ನಿಗೆ ಬಂದವನು ಹ್ಯಾರಿಯೆಟ್‌ಳನ್ನು ವಿವಾಹವಾದ.  ಲಂಡನ್ನಿನಲ್ಲಿ ವಿಲಿಯಂ ಗಾಡ್ವಿಯನ್ನು ಭ...

ಶಾಸನ ಸಾಹಿತ್ಯದಲ್ಲಿ ದೇಕಬ್ಬೆ ಶಾಸನದ ಸ್ಥಾನ

ಪೀಠಿಕೆ :  ಶಾಸನಗಳಲ್ಲಿ ಹಲವು ಪ್ರಕಾರಗಳುಂಟು. ಅದರಲ್ಲಿ ಆತ್ಮಬಲಿಯೂ ಒಂದು. ಬೇರೆ ಬೇರೆ ಕಾರಣಗಳಿಗಾಗಿ ಪ್ರಾಣತ್ಯಾಗ ಮಾಡುತ್ತಿದ್ದ ಅನೇಕ ಉದಾಹರಣೆಗಳುಂಟು. ಅವರಿಗೆ ಹಾಕಿಸುತ್ತಿದ್ದ ಶಾಸನಗಳಿಗೆ ಸ್ಮಾರಕ ಶಾಸನ ಎಂದು ಹೆಸರು. ವೀರರ ಪತ್ನಿಯರು ಸಹಗಮನ ಪ್ರಕಾರ ಮರಣ ಹೊಂದುತ್ತಿದ್ದರು. ಆಗ ಅವರಿಗೆ ಹಾಕಿಸುತ್ತಿದ್ದ ಸ್ಮಾರಕಗಳನ್ನು ಮಹಾಸತಿಕಲ್ಲು ಅಥವಾ ಮಾಸ್ತಿಕಲ್ಲು ಎಂದು ಕರೆಯುತ್ತಿದ್ದರು.  "ದೇಕಬ್ಬೆಯ ಶಾಸನ ಅಂತಹಾ ಒಂದು ಮಾಸ್ತಿಕಲ್ಲು" ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಬೆಳತೂರು ಗ್ರಾಮದ ಅಡ್ಡಕಟ್ಟೆ ಹೊಲದಲ್ಲಿರುವ ಮಹಾಸತಿ ಶಾಸನವನ್ನು ಪತ್ತೆ ಹಚ್ಚಿದವರು  ಬಿ.ಎಲ್.ರೈಸ್. ' ಎಪಿಗ್ರಾಫಿಯಾ ಕರ್ನಾಟಿಕಾ'ದ ಎರಡನೇ ಎರಡನೇ ಸಂಪುಟದಲ್ಲಿ ಶಾಸನದ ಪಠ್ಯವನ್ನು ಪ್ರಕಟಿಸಿದರು.  ನಂತರ ರೆವೆರೆಂಡ್ ಕಿಟ್ಟೆಲ್ ರವರು ಈ ಶಾಸನವನ್ನು ಎಪಿಗ್ರಾಫಿಯಾ ಇಂಡಿಕಾ ದಲ್ಲಿ ಪ್ರಕಟಿಸಿದರು.  ಈ ಶಾಸನದ ವಿಶೇಷತೆಯೆಂದರೆ ಇದು ಬೇರೆ ಶಾಸನಗಳಂತೆ ದೇವತಾ ಶ್ಲೋಕದಿಂದ ಪ್ರಾರಂಭವಾಗುವುದಿಲ್ಲ. ಗದ್ಯಕ್ಕಿಂತ ಪದ್ಯಭಾಗವೇ ಇದರಲ್ಲಿ ಹೆಚ್ಚು. ಇದರಲ್ಲಿ ಒಟ್ಟು 23 ಪದ್ಯಗಳಿವೆ.  ದೇಕಬ್ಬೆಯು ತನ್ನ ಪತಿಯ ಮರಣದ ಸುದ್ದಿ ಕೇಳಿದ ತಕ್ಷಣ ಇಹಲೋಕವನ್ನು ತ್ಯಜಿಸಲು ಸಿದ್ಧಳಾದಳು. ಚಿತೆಯನ್ನು ಸಿದ್ಧಪಡಿಸಿ ಉರಿಯುತ್ತಿದ್ದ ಚಿತೆ ಹೊಕ್ಕಳು. ತನ್ನ ಮಗಳ ಸ್ಮಾರಕವಾಗಿ ಆಕೆಯ ತಂದೆ ಶಾಸನ ಸಹಿತವಾದ ...