ಪೋಸ್ಟ್‌ಗಳು

ಭಾರತೀಯ ಕಾವ್ಯ ಮೀಮಾಂಸೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ರಸಗಳ ಸಂಖ್ಯೆಯನ್ನು ಕುರಿತು ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ನಡೆದಿರುವ ಚರ್ಚೆ

ಪೀಠಿಕೆ :  ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ರಸ ಸಿದ್ದಾಂತಕ್ಕೆ ಅನನ್ಯವಾದ ಸ್ಥಾನವಿದೆ. ಭರತಮುನಿಯು ರಸ ಸಿದ್ಧಾಂತದ ಪ್ರಥಮ ಪ್ರವರ್ತಕ ಎನಿಸಿದ್ದಾನೆ‌. ಭರತನು ತನ್ನ ನಾಟ್ಯ ಶಾಸ್ತ್ರದಲ್ಲಿ 'ಈ ಮೂರುಲೋಕಗಳ ಭಾವದ ಅನುಕೀರ್ತನವೇ ನಾಟ್ಯ' ಎಂಬ ಒಂದು ಮಾತು ಹೇಳಿದ್ದಾನೆ. ನಾಟ್ಯದಂತೆ ಕಾವ್ಯವೂ ಮೂರು ಲೋಕಗಳ ಭಾವದ ಅನುಕೀರ್ತನವೇ ಆಗಿರುವುದರಿಂದ, ರಸ ಸಿದ್ಧಾಂತವನ್ನು ನಾಟಕದಂತೆಯೇ ಕಾವ್ಯಗಳಿಗೂ ಅನ್ವಯಿಸಿಕೊಳ್ಳಬಹುದು. 'ವಿಭಾವ, ಅನುಭಾವ, ವ್ಯಭಿಚಾರಿ (ಸಂಚಾರಿ)' ಭಾವಗಳ ಸಂಯೋಗದಿಂದ " ರಸ " ನಿಷ್ಪನ್ನವಾಗುತ್ತದೆ ಎಂದು ಭರತ ಹೇಳಿದ್ದಾನೆ.  " ರಸ " ಎಂಬುದು ಒಂದು ಬಗೆಯ ಚಿತ್ತ ಸ್ಥಿತಿ. ಅದು ಮನಸ್ಸನ್ನು ಏಕಾಗ್ರಗೊಳಿಸಿ ಸ್ವಾಸ್ಥ್ಯವನ್ನು ತರುತ್ತದೆ. ನಂತರ ಆ ಸ್ವಾಸ್ಥ್ಯದ ಸ್ಥಿತಿಯಲ್ಲಿಯೇ ಮನಸ್ಸು ಸ್ವಲ್ಪ ಕಾಲ ನಿಲ್ಲುವಂತೆ ಮಾಡುತ್ತದೆ. ವೇದೋಪನಿಷತ್ತುಗಳಲ್ಲಿ ರಸವೆಂಬ ಪದಕ್ಕೆ ಆತ್ಮಸಾಕ್ಷಾತ್ಕಾರ ಎಂಬರ್ಥವಿದೆ. ಅತ್ಯಂತ ಸರಳವಾದ ಮಾತಿನಲ್ಲಿ ಹೇಳುವುದಾದರೆ ಸುಂದರವಾದ ಕಾವ್ಯವನ್ನು ಓದಿ, ನಮಗೆ ನಾವೇ ಪಡುವ ಸಂತೋಷವೇ " ರಸ ". ಕಾವ್ಯರಸವು ಆನಂದಾತ್ಮಕ ಎಂಬ ಹೇಳಿಕೆಯು ತೈತ್ತರೀಯ ಉಪನಿಷಿತ್ತಿನ " ರಸೋ ವೈ ಸಃ " ಎಂಬ ವಾಕ್ಯದಲ್ಲಿದೆ.  ರಸಗಳ ಸಂಖ್ಯೆ :  ರಸಗಳ ಸಂಖ್ಯೆ ಎಷ್ಟು ಎಂಬ ವಿಚಾರವಾಗಿ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ವಿಪ...

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)

ಪೀಠಿಕೆ : ಕಾವ್ಯಮೀಮಾಂಸೆ ಎಂದರೆ ಕಾವ್ಯವನ್ನು ಕುರಿತ ಚರ್ಚೆ ಎಂದರ್ಥ. ಕಾವ್ಯ ಎಂದರೇನು? ಅದು ಹೇಗೆ ನಿರ್ಮಿತಿಯಾಗುತ್ತದೆ? ಏಕೆ ನಿರ್ಮಿತಿಯಾಗುತ್ತದೆ? ಎಂಬ ಸಂಗತಿಗಳನ್ನು ಕುರಿತ ಚರ್ಚೆಯೇ " ಕಾವ್ಯ ಮೀಮಾಂಸೆ ". ಶಬ್ದಾರ್ಥ ಸಹಿತವಾದದ್ದು ಕಾವ್ಯ. ಆ ಕಾವ್ಯದ ಶಬ್ದಾರ್ಥ ಸ್ವರೂಪವನ್ನು ಕುರಿತ ಚರ್ಚೆಯೇ ಕಾವ್ಯಮೀಮಾಂಸೆ. ಕಾವ್ಯ ಅಥವಾ ಸಾಹಿತ್ಯದಲ್ಲಿ ನಮ್ಮ ಲೌಕಿಕ ವ್ಯವಹಾರದ ಮಾತುಗಳೇ ಕಂಡುಬಂದರೂ, ಅವು ಲೋಕ ಮತ್ತು ಶಾಸ್ತ್ರದಲ್ಲಿ ಕಂಡುಬರುವ ಶಬ್ದಾರ್ಥಕ್ಕಿಂತ ಭಿನ್ನವಾದ, ವಿಶಿಷ್ಟವಾದ ಒಂದು ಉಕ್ತಿ ವೈಚಿತ್ರ್ಯ ಹೊಂದಿರುತ್ತದೆ. ಯಾವ ಕಾರಣದಿಂದಾಗಿ ಕಾವ್ಯದ ಶಬ್ದಾರ್ಥವು ಲೌಕಿಕ ವ್ಯವಹಾರದ ಶಬ್ದಾರ್ಥದಿಂದ ಬೇರೆಯಾದ ಅರ್ಥ ಹೊಂದಿರುತ್ತದೆ‌ ಎಂಬ ರಹಸ್ಯ ಶೋಧನೆಯೇ "ಕಾವ್ಯ ಮೀಮಾಂಸೆಯ" ಮೊದಲ ಹೆಜ್ಜೆ. ಹೀಗೆ ಶಬ್ದಾರ್ಥಸಹಿತವಾದ ಕಾವ್ಯದ ಸ್ವರೂಪವನ್ನು ಕುರಿತು ಹಿಂದಿನಿಂದ ಇಂದಿನವರೆಗೂ ಸೂತ್ರಗಳು, ವ್ಯಾಖ್ಯಾನಗಳು ಬರುತ್ತಲೇ ಇವೆ. ಒಂದೊಂದು ಕಾಲದಲ್ಲಿಯೂ ಅಂದಂದಿನವರು ಕಾವ್ಯದ ಯಾವುದೋ ಲಕ್ಷಣವನ್ನು ಎತ್ತಿ ಹಿಡಿದು ಅದೇ ಕಾವ್ಯದ ಆತ್ಮ ಎಂದು ಹೇಳುತ್ತಾ ಬಂದಿದ್ದಾರೆ. ಏಕೆಂದರೆ ಇದುವರೆಗೂ ಯಾರಿಂದಲೂ ಕಾವ್ಯವನ್ನು ಕುರಿತು ಸಮರ್ಪಕವಾದ ಕೊನೆಯ ಸೂತ್ರವನ್ನು ಹೇಳಲು ಸಾಧ್ಯವಾ...