ಪೋಸ್ಟ್‌ಗಳು

ವಾಸ್ತವದ ರಾಜಮಾರ್ಗ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ವಾಸ್ತವದ ರಾಜಮಾರ್ಗ : Realism

ಜಿ. ಎಸ್. ಅಮೂರ :  ಜಿ.ಎಸ್. ಅಮೂರ ರವರು ಬೊಮ್ಮನಹಳ್ಳಿಯಲ್ಲಿ ಹುಟ್ಟಿದರು. ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಮತ್ತು ಯೇಲ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದರು. ಮಹಾರಾಷ್ಟ್ರ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹೆಸರು   : ಜಿ. ಎಸ್. ಅಮೂರ ಹುಟ್ಟಿದ ಸ್ಥಳ : ಬೊಮ್ಮನಹಳ್ಳಿ ಹುಟ್ಟಿದ ದಿನಾಂಕ : 1925 ಕೃತಿಗಳು :  ಕೃತಿ ಪರೀಕ್ಷೆ, ಮಹಾಕವಿ ಮಿಲ್ಟನ್ ಜಿ.ಎಸ್.ಆಮೂರ ಅವರು ಕನ್ನಡದ ಮಹತ್ವದ ವಿಮರ್ಶಕರಾಗಿ ಹೆಸರಾಗಿದ್ದಾರೆ. ಪ್ರಸ್ತುತ ಲೇಖನವು "ಕನ್ನಡ ಕಾದಂಬರಿಯ ಬೆಳವಣಿಗೆ" ಎಂಬ ಪುಸ್ತಕದಲ್ಲಿ ಪ್ರಕಟವಾಗಿತ್ತು. ಎಚ್.ಎಸ್.ರಾಘವೇಂದ್ರರಾವ್ ಅವರು ಸಂಪಾದಕರಾಗಿರುವ "ಶತಮಾನದ ಸಾಹಿತ್ಯ ವಿಮರ್ಶೆ" ಎಂಬ ಪುಸ್ತಕದಿಂದ ಈ ಲೇಖನವನ್ನು ಪಠ್ಯಕ್ಕೆ ತೆಗೆದುಕೊಳ್ಳಲಾಗಿದೆ. ಕನ್ನಡ ಕಾದಂಬರಿಯ ಆರಂಭಿಕ ಹಂತಗಳಾದ ನವೋದಯ ಮತ್ತು ಪ್ರಗತಿಶೀಲ ನೆಲೆಗಳಲ್ಲಿ, ಪಾಶ್ಚಾತ್ಯ ಮತ್ತು ಭಾರತೀಯ ತತ್ತ್ವ ಚಿಂತನೆಗಳೆರಡನ್ನೂ ಸಮೀಕರಿಸಿ ವಿಶ್ಲೇಷಿಸಿರುವ ಈ ಲೇಖನ ವಿಮರ್ಶಾ ಬೆಳವಣಿಗೆಯಲ್ಲಿ ಮಹತ್ವದ ಮೈಲಿಗಲ್ಲು ಎಂದೇ ಭಾವಿಸಲಾಗಿದೆ.  ಪೀಠಿಕೆ :  ಜಿ.ಎಸ್.ಅಮೂರ ಅವರ "ಕನ್ನಡ ಕಾದಂಬರಿಯ ಬೆಳವಣಿಗೆ" ಎಂಬ ಪುಸ್ತಕದಿಂದ ಈ ಲೇಖನವನ್ನು ಆರಿಸಿಕೊಳ್ಳಲಾಗಿದೆ. ಕನ್ನಡ ಕಾದಂಬರಿಯ ಆರಂಭಿಕ ಹಂತ...