ಹಲ್ಮಿಡಿ ಶಾಸನದ ಚಾರಿತ್ರಿಕ, ಧಾರ್ಮಿಕ, ಸಾಮಾಜಿಕ ಸಂಗತಿ
ಪೀಠಿಕೆ : ಹಲ್ಮಿಡಿ ಶಾಸನವು ಕನ್ನಡದ ಮೊಟ್ಟಮೊದಲ ಉಪಲಬ್ಧ ಶಾಸನವಾಗಿದೆ. ಈ ಶಾಸನವನ್ನು ಸಂಪಾದಿಸಿದವರು ಎಂ.ಎಚ್.ಕೃಷ್ಣ ಅವರು. ಈ ಶಾಸನವು ಚಿಕ್ಕಮಗಳೂರು ಜಿಲ್ಲೆಯ ಬೇಲೂರು ತಾಲ್ಲೂಕಿನ ಬಳಿ ದೊರೆತಿದೆ. ಈ ಶಾಸನದ ಕಾಲ ಸುಮಾರು ಕ್ರಿ.ಶ. 450. ಈ ಶಾಸನದ ಕಾಲದಲ್ಲಿ ಕದಂಬ ವಂಶದ ಕಾಕುತ್ಸ್ಥವರ್ಮನು ಆಳ್ವಿಕೆ ಮಾಡುತ್ತಿದ್ದನೆಂದು ತಿಳಿದು ಬರುತ್ತದೆ. ಶಾಸನವು ಗದ್ಯ ರೂಪದಲ್ಲಿ ಇರುವುದರಿಂದ ಕನ್ನಡ ಗದ್ಯ ಇತಿಹಾಸದ ಅಧ್ಯಯನಕ್ಕೆ ನಾವು ಹಲ್ಮಿಡಿ ಶಾಸನವನ್ನು ಗಮನಿಸಲೇಬೇಕಾಗುತ್ತದೆ. ಇದೊಂದು ಪ್ರಶಸ್ತಿ ಶಾಸನವಾಗಿದ್ದು, ವೀರನೊಬ್ಬನ ಶೌರ್ಯಕ್ಕೆ ಮೆಚ್ಚಿ ಆತನಿಗೆ ಉಡುಗೊರೆ ನೀಡಿರುವ ವಿವರಗಳನ್ನು ಒಳಗೊಂಡ ಶಾಸನವಾಗಿದೆ. 'ವಿಜ ಅರಸ' ಎಂಬುವವನೇ ಆ ಗೌರವಕ್ಕೆ ಪಾತ್ರನಾದ ವ್ಯಕ್ತಿ. ಆತ ಯುದ್ಧದಲ್ಲಿ ತೋರಿದ ಶೌರ್ಯಕ್ಕಾಗಿ ಪಲ್ಮಿಡಿ ಮತ್ತು ಮೂನವಳ್ಳಿ ಗ್ರಾಮಗಳನ್ನು ಬಾಳ್ಗಚ್ಚು ಕೊಡುಗೆಯಾಗಿ ನೀಡಿರುವುದಾಗಿ ಶಾಸನದಿಂದ ತಿಳಿದುಬರುತ್ತದೆ. ಹಲ್ಮಿಡಿ ಶಾಸನದ ಚಾರಿತ್ರಿಕ ಮಹತ್ವ : ಈ ಶಾಸನವನ್ನು ಹಾಕಿಸಿದ್ದ ಕಾಲದಲ್ಲಿ ಕದಂಬ ವಂಶದ ದೊರೆ ಕಾಕುತ್ಸ್ಥವರ್ಮ ಆಳ್ವಿಕೆ ನಡೆಸುತ್ತಿದ್ದ ಎಂದು ತಿಳಿದು ಬರುತ್ತದೆ. ಈ ಶಾಸನ ಸಿಗುವವರೆಗೆ ಬಾದಾಮಿಯ ಚಾಳುಕ್ಯರ ಅರಸನಾದ ಮಂಗಳೇಶನ ವೈಷ್ಣವ ಗುಹಾಶಾಸನವೇ ಅತ್ಯಂತ ಪ್ರಾಚೀನ ಶಾಸನ ಎಂದು ತಿಳಿಯಲಾಗಿತ್ತು. ಈಗ ಹಲ್ಮಿಡಿ ಶಾಸನವು ' ಕನ್ನಡದ ಪ್ರಾಚೀನತಮ ...